ಕುಂದಾಪುರ:- ‘ಬ್ಯಾರೀಸ್’ನಲ್ಲಿ ನೂತನ ಅಕ್ಷರ ದಾಸೋಹ ಕೊಠಡಿ ಉದ್ಘಾಟನೆ


Image

ಮಂಗಳೂರು, ಜೂ.25: ಹಾಜಿ ಕೆ. ಮೊಹಿದ್ದೀನ್ ಬ್ಯಾರಿ ಅನುದಾನಿತ ಪ್ರೌಢಶಾಲೆಯ ಅಕ್ಷರ ದಾಸೋಹ ನೂತನ ಕೊಠಡಿಯನ್ನು ಕರ್ನಾಟಕ ಸರಕಾರದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ಕಿಮ್ಮನೆ ರತ್ನಾಕರ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಡುಪಿಯ ಉಪನಿರ್ದೇಶಕರಾದ ನಾಗೇಂದ್ರ ಮಧ್ಯಸ್ಥ, ಕುಂದಾಪುರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಗೋಪಾಲಶೆಟ್ಟಿ, ಶಾಲಾ ಆಡಳಿತ ಮಂಡಳಿಯ ಸಂಚಾಲಕ ಎಸ್.ಎಂ. ಬ್ಯಾರಿ, ಅಧ್ಯಕ್ಷ ಹಾಜಿ ಮಾಸ್ಟರ್ ಮಹಮೂದ್, ಮುಖ್ಯ ಶಿಕ್ಷಕರು ಮತ್ತು ಶಾಲಾಭಿವೃದ್ದಿ ಸಮಿತಿಯ ಸದ್ಯಸರು ಉಪಸ್ಥಿತರಿದ್ದರು.

ಗಂಗೊಳ್ಳಿ : ಉಚಿತ ಪಠ್ಯಪುಸ್ತಕ, ಸಮವಸ್ತ್ರ ವಿತರಣೆ


ಗಂಗೊಳ್ಳಿ : ಗಂಗೊಳ್ಳಿಯ ರಥಬೀದಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶೈಕ್ಷಣಿಕ ಪ್ರಾರಂಭೋತ್ಸವ ಸಮಾರಂಭ ಇತ್ತೀಚಿಗೆ ಜರಗಿತು. ಶಾಲಾಭಿವೃದ್ಧಿ ಸಮಿತಿ ಸದಸ್ಯೆ ರಾಧಾ ಅವರು ಶಾಲೆಯ ವಿದ್ಯಾರ್ಥಿಗಳಿಗೆ ಸರಕಾರದಿಂದ ನೀಡಲ್ಪಟ್ಟ ಉಚಿತ ಪಠ್ಯ ಪುಸ್ತಕ ಹಾಗೂ ಸಮವಸ್ತ್ರವನ್ನು ವಿತರಿಸಿ ಶುಭ ಹಾರೈಸಿದರು. 

Image

ಶಾಲೆಯ ಮುಖ್ಯ ಶಿಕ್ಷಕಿ ಉಷಾ ದಿನಕರ ಅವರು ತಮ್ಮ ತಂದೆ ಶಾಂತಾನಂದ, ತಾಯಿ ಸುಶೀಲಾ ಶಾಂತಾನಂದ ಹಾಗೂ ತಮ್ಮ ಚಂದ್ರು ಇವರ ಸ್ಮರಣಾರ್ಥ ಸುಮಾರು ೫ ಸಾವಿರ ರೂ. ಮೌಲ್ಯದ ನೋಟ್ಸ್ ಪುಸ್ತಕ, ಲೇಖನ ಸಾಮಾಗ್ರಿ ಹಾಗೂ ೫ನೇ ತರಗತಿಯ ವಿದ್ಯಾರ್ಥಿಗಳಿಗೆ ಇಂಗ್ಲೀಷ್ ಶಬ್ದಕೋಶ ವಿತರಿಸಿದರು. ಸಹಶಿಕ್ಷಕಿ ಚಂದ್ರಕಲಾ ಸ್ವಾಗತಿಸಿ, ಸಹಶಿಕ್ಷಕಿ ಪ್ರೇಮಲತಾ ವಂದಿಸಿದರು.

ತ್ರಾಸಿ:-ವರ್ಗಾವಣೆ, ಬೀಳ್ಕೊಡುಗೆ


ಗಂಗೊಳ್ಳಿ : ಕಳೆದ ೪ ವರ್ಷಗಳಿಂದ ತ್ರಾಸಿ ಅಂಚೆ ಕಚೇರಿಯಲ್ಲಿ ಸೇವೆ ಸಲ್ಲಿಸಿ ಇದೀಗ ಗುಜ್ಜಾಡಿ ಅಂಚೆ ಕಚೇರಿಗೆ ವರ್ಗಾವಣೆಗೊಂಡಿರುವ ಅಂಚೆ ಪಾಲಕ ಸೀತಾರಾಮ ಗಾಣಿಗ ಅವರನ್ನು ತ್ರಾಸಿ ಗ್ರಾಮಸ್ಥರು ಮತ್ತು ತ್ರಾಸಿ ಅಂಚೆ ಕಛೇರಿಯ ಸಿಬ್ಬಂದಿಗಳು ಸನ್ಮಾನಿಸಿ ಬೀಳ್ಕೊಟ್ಟರು..

ತ್ರಾಸಿ ಅಂಚೆ ಕಚೇರಿಯ ಉಪಅಂಚೆ ಪಾಲಕ ಅರುಣ್‌ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತ್ರಾಸಿಯ ಉದ್ಯಮಿಗಳಾದ ಮಂಜುನಾಥ ಭಂಡಾರಿ, ಸುಧಾಕರ ಶೆಟ್ಟಿ ವರ್ಗಾವಣೆಗೊಂಡಿರುವ ಸೀತಾರಾಮ ಗಾಣಿಗರ ಸೇವೆಯನ್ನು ಸ್ಮರಿಸಿ ಶುಭ ಹಾರೈಸಿದರು. ತ್ರಾಸಿ ಅಂಚೆ ಕಚೇರಿಯ ಸಿಬ್ಬಂದಿಗಳಾದ ಗುರುದೀಪಕ್ ಕಾಮತ್, ಶಶಿಪ್ರಭಾ, ಮಾಧವ ಖಾರ್ವಿ, ಹಡವು ಬ್ರಾಂಚ್ ಆಫೀಸರ್ ಕೃಷ್ಣ ನಾಯ್ಕ್ ಶುಭಾಶಂಸನೆಗೈದರು.
Image
 
ಕುಂದ ಬಾರಂದಾಡಿ ಬಿಪಿಎಮ್ ಸುರೇಶ ಕಾರ್ಣಿಕ್, ಸಿಬ್ಬಂದಿಗಳಾದ ಪಾಂಡುರಂಗ ಸೇನಾಪುರ, ಸದಾಶಿವಯ್ಯ ಹಡವು, ತೇಜ ಬಿಲ್ಲವ, ರಮೇಶ ಹಕ್ಲಾಡಿ, ಶಕೀಲಾ, ಅಕ್ಷತಾ, ಅಶ್ವಿನಿ ಮೊದಲಾದವರು ಉಪಸ್ಥಿತರಿದ್ದರು.ತ್ರಾಸಿ ಅಂಚೆ ಸಹಾಯಕ ನಾಗರಾಜ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಶಶಿಪ್ರಭಾ ವಂದಿಸಿದರು.

 

ಗಂಗೊಳ್ಳಿ:- ಬೈಕುಗಳೆರಡರ ನಡುವೆ ಅಫಘಾತ, ಮೂವರು ಆಸ್ಪತ್ರೆಗೆ


  • Image
  • ಗಂಗೊಳ್ಳಿ: ದಿನಾಂಕ 25/06/2014  ರಂದು ಪಿರ್ಯಾದುದಾರರಾದ ರಾಘವೇಂದ್ರ ಶೆಟ್ಟಿ (52)ತ್ರಾಸಿ ಇವರು ತನ್ನ  ಕೆಎ-20-ಎಸ್‌-6264 ನೇ ಮೋಟಾರು ಸೈಕಲ್‌ ನಲ್ಲಿ ಸವಾರಿ ಮಾಡಿಕೊಂಡು ಗುಜ್ಜಾಡಿ ಗ್ರಾಮದ ಪಶು ಚಿಕಿತ್ಸಾಯದ ಎದುರು ಡಾಮರು ರಸ್ತೆಯಲ್ಲಿ  ಮೋಟಾರು ಸೈಕಲನ್ನು ಬಲಗಡೆಗೆ ಸಿಗ್ನಲ್‌ ಮಾಡಿ ಬೆಳಿಗ್ಗೆ 11 ಗಂಟೆಗೆ ಸಮಯಕ್ಕೆ ತಿರುಗಿಸುವಾಗ ಹಿಂದಿನಿಂದ ಕೆಎ-20-ಯು-1026 ನೇ ಪಲ್ಸರ್‌ ಮೋಟಾರು ಸೈಕಲ್‌ ಸವಾರನಾದ ನಾಗೇಶನು ಮೋಟಾರು ಸೈಕಲನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಮೋಟಾರು ಸೈಕಲ್ಲಿಗೆ ಡಿಕ್ಕಿ ಹೊಡೆದಿದ್ದು. ಇದರ ಪರಿಣಾಮ ಪಿರ್ಯಾದಿದಾರರಿಗೆ ತಲೆಗೆಹಣೆಗೆಸೊಂಟಕ್ಕೆ ಹಾಗೂ ಎಡಕಾಲಿನ ಪಾದಕ್ಕೆ ಪೆಟ್ಟಾಗಿರುತ್ತದೆ. ಈ ಬಗ್ಗೆ ರಾಘವೇಂದ್ರ ಶೆಟ್ಟಿರವರು ನೀಡಿದ ದೂರಿನಂತೆ ಗಂಗೊಳ್ಳಿ ಠಾಣೆಯಲ್ಲಿ ಅಪರಾಧ ಕ್ರಮಾಂಕ 140/2014 ಕಲಂ 279, 337 ಐ.ಪಿ.ಸಿ.ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ

Image

Image

Image

 

ಕುಂದಾಪುರ:- 26 ರಂದು ರಮಜಾನ್ ಕಿಟ್ ವಿತರಣಾ ಕಾರ್ಯಕ್ರಮ


Image
ಕುಂದಾಪುರ:- ದೂರದ ಸೌದಿ ಅರೇಬಿಯಾದ ರಿಯಾಧ್ ಪ್ರದೇಶದಲ್ಲಿ ದುಡಿಯುತ್ತಿರುವ ಕುಂದಾಪುರ ತಾಲ್ಲೂಕಿನ 43 ಜನರು ಸ್ವಯಂಪ್ರೇರಿತರಾಗಿ ಮುಂದೆ ಬಂದು ಬಡ ಬಗ್ಗರಿಗಾಗಿ ಸಹಾಯ ಮಾಡಲು ಆರಂಭಿಸಿರುವ ಖಿದ್ಮ ಫೌಂಡೇಶನ್ ಎಂಬ ಸಂಸ್ಥೆ ವತಿಯಿಂದ ತಾಲೂಕಿನ 300 ಆಯ್ದ ಕುಟುಂಬಗಳಿಗೆ ರಮಜಾನ್ ಕಿಟ್ ವಿತರಿಸುವ ಕಾರ್ಯಕ್ರಮವನ್ನು 26 ನೇಯ ತಾರೀಕಿನಂದು ಕುಂದಾಪುರ ಮಸೀದಿ ಸಮೀಪದ ಉರ್ದು ಶಾಲಾ ವಟಾರದಲ್ಲಿ ಆಯೋಜಿಸಲಾಗಿದೆ ಎಂದು ಇಂದು ಕುಂದಾಪುರದಲ್ಲಿ ಕರೆದ ಪತ್ರಿಕಾಗೋಷ್ಟಿಯಲ್ಲಿ ಆಯೋಜಕರು ತಿಳಿಸಿದರು…

ಗಂಗೊಳ್ಳಿಯಲ್ಲಿ ಉಚಿತ ಆರೋಗ್ಯ ಮತ್ತು ಮೂಳೆಸಾಂದ್ರತೆ ತಪಾಸಣಾ ಶಿಬಿರ


ಗಂಗೊಳ್ಳಿ : ಶ್ರೀ ರಾಘವೇಂದ್ರ ಸ್ಪೋಟ್ರ್ಸ್ ಕ್ಲಬ್ ಗಂಗೊಳ್ಳಿ, ಶ್ರೀ ಯಾದವೇಂದ್ರ ಆಯುರ್ವೇದ ವೈದ್ಯಶಾಲಾ ಕೋಟೇಶ್ವರ ಹಾಗೂ ಚ್ಯವನ ಮಲ್ಟಿಸ್ಪೆಶಾಲಿಟಿ ಕ್ಲಿನಿಕ್ ಮತ್ತು ಡಯಾಗ್ನೊಸ್ಟಿಕ್ ಸೆಂಟರ್ ಇವರ ಸಂಯುಕ್ತ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣೆ (ಆಯುರ್ವೇದ), ಉಚಿತ ಮಧುಮೇಹ ತಪಾಸಣೆ, ಉಚಿತ ರಕ್ತ ಗುಂಪು ವರ್ಗೀಕರಣ ಹಾಗೂ ಮೂಳೆ ಸಾಂದ್ರತೆ ತಪಾಸಣಾ ಶಿಬಿರ ಭಾನುವಾರ ಗಂಗೊಳ್ಳಿಯ ಸ.ವಿ.ಪದವಿಪೂರ್ವ ಕಾಲೇಜಿನ ವಠಾರದಲ್ಲಿ ಜರಗಿತು.

Image

ಮಣಿಪಾಲ ಕೆಎಂಸಿ ಆಸ್ಪತ್ರೆಯ ಆಯುರ್ವೇದ ವಿಭಾಗದ ಮುಖ್ಯಸ್ಥ ಡಾ. ಎಂ.ಎಸ್.ಕಾಮತ್, ಕೇರಳದ ಪ್ರಸಿದ್ಧ ಆಯುರ್ವೇದ ತಜ್ಞ ಡಾ. ರಾಜೀವ ಶೆಣೈ ಹಾಗೂ ಕೋಟೇಶ್ವರದ ಶ್ರೀ ಯಾದವೇಂದ್ರ ಆಯುರ್ವೇದ ವೈದ್ಯಶಾಲೆಯ ಡಾ. ತೇಜಸ್ವಿನಿ ಹಾಗೂ ಚ್ಯವನ ಮಲ್ಟಿಸ್ಪೆಶಾಲಿಟಿ ಕ್ಲಿನಿಕ್ ಮತ್ತು ಡಯಾಗ್ನೊಸ್ಟಿಕ್ ಸೆಂಟರ್‍ನ ಪಿ.ಎ.ಭಟ್ ನೇತೃತ್ವದಲ್ಲಿ ಶಿಬಿರ ಜರಗಿತು. ಕೋಟೇಶ್ವರದ ಉದ್ಯಮಿ ಕೆ.ದಿನೇಶ ಕಾಮತ್, ಗಂಗೊಳ್ಳಿಯ ಉದ್ಯಮಿ ಎಚ್.ಗಣೇಶ್ ಕಾಮತ್, ಡಾ.ಕಾಶೀನಾಥ ಪಿ.ಪೈ, ಶ್ರೀ ರಾಘವೇಂದ್ರ ಸ್ಪೋಟ್ರ್ಸ್ ಕ್ಲಬ್‍ನ ಅಧ್ಯಕ್ಷ ಕೆ.ಶ್ರೀನಿವಾಸ ನಾಯಕ್, ಕೆ.ರಾಮನಾಥ ನಾಯಕ್, ಎನ್.ಅಶ್ವಿನ್ ನಾಯಕ್ ಮೊದಲಾದವರು ಉಪಸ್ಥಿತರಿದ್ದರು.
 
ಶಿಬಿರದಲ್ಲಿ ಉಚಿತ ತಪಾಸಣೆ ಹಾಗೂ ಉಚಿತ ಔಷಧಿಗಳನ್ನು ವಿತರಿಸಲಾಯಿತು. ಸುಮಾರು 150 ಮಂದಿ ಶಿಬಿರದ ಪ್ರಯೋಜನ ಪಡೆದುಕೊಂಡರು.